
| ಬಾಲಿ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ 16ನೇ ಏಷಿಯನ್ ಬಿಲ್ಗಾರಿಕಾ ಚಾಂಪಿಯನ್‌ಶಿಪ್‌ನ ಕಂಪೌಂಡ್ ವಿಭಾಗದಲ್ಲಿ ಭಾರತೀಯ ಪುರುಷರ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಸಿ. ಶ್ರೀಧರ್, ಕೆ.ಎಚ್. ರತನ್ ಸಿಂಗ್ ಮತ್ತು ಇಸಿಯಾ ಆರ್. ಸನಮ್‌ರನ್ನೊಳಗೊಂಡ ಪುರುಷರ ತಂಡ ಚಿನ್ನ ಗೆದ್ದರೆ, ಪುರುಷರ ರಿಕರ್ವ್ ಮತ್ತು ಮಹಿಳೆಯ ಕಂಪೌಂಡ್ ತಂಡಗಳು ಬೆಳ್ಳಿ ಪದಕ ಗೌರವ ಪಡೆದುಕೊಂಡಿವೆ. |