
| ಪೇಶಾವರ: ವಾಯವ್ಯ ಪಾಕಿಸ್ತಾನ ನಗರ ಪೇಶಾವರದಲ್ಲಿ ಅಜ್ಞಾತ ದುಷ್ಕರ್ಮಿಗಳು ಪೊಲೀಸ್ ವಾಹನವೊಂದರ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ ಇಬ್ಬರು ಪೊಲೀಸರು ಅಸುನೀಗಿದ್ದು 7 ಜನರು ಗಾಯಗೊಂಡಿದ್ದಾರೆ. ಕೋರ್ಟ್ ಸಂಕೀರ್ಣದಲ್ಲಿ ಉಗ್ರಗಾಮಿಗಳ ಬಾಂಬ್ ದಾಳಿಗೆ 19 ಜನರು ಬಲಿಯಾದ ಕೆಲವೇ ಗಂಟೆಗಳಲ್ಲಿ ಈ ದುರ್ಘಟನೆ ಸಂಭವಿಸಿದೆ. |
| ಕಾಬೂಲ್: ಆಗ್ನೇಯ ಆಫ್ಘಾನಿಸ್ತಾನದಲ್ಲಿ ಮೋಟರ್‌ಸೈಕಲ್‌ನಲ್ಲಿ ಆಗಮಿಸಿದ ಆತ್ಮಾಹುತಿ ಬಾಂಬರ್ ಸ್ವತಃ ಸ್ಫೋಟಿಸಿಕೊಂಡಿದ್ದರಿಂದ ಪೊಲೀಸನೊಬ್ಬ ಸೇರಿದಂತೆ 13 ಜನರು ಹತರಾಗಿದ್ದಾರೆ. ಇರಾನ್ ಗಡಿಯಲ್ಲಿರುವ ಮರಳುಗಾಡು ಪ್ರಾಂತ್ಯ ಫರಾದಲ್ಲಿ ಈ ವರ್ಷ ಬಂಡುಕೋರರ ದಾಳಿಗಳು ತೀವ್ರತೆ ಪಡೆದಿದ್ದು, ಹೊಸ ಪ್ರದೇಶಗಳಲ್ಲಿ ತಾಲಿಬಾನಿಗಳು ಸಕ್ರಿಯರಾಗಿದ್ದಾರೆ. |
| ಪೇಶಾವರ: ವಾಯವ್ಯ ಪಾಕಿಸ್ತಾನದ ಪೇಶಾವರದಲ್ಲಿ ಉಗ್ರಗಾಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 16 ಜನರು ಸತ್ತಿದ್ದು 25 ಜನರಿಗೆ ಗಾಯಗಳಾಗಿವೆಯೆಂದು ಪೊಲೀಸ್ ಮೂಲಗಳು ಹೇಳಿವೆ. ಪೇಶಾವರದ ಖೈಬರ್ ರಸ್ತೆಯ ಕೋರ್ಟ್ ಕಟ್ಟಡದ ಬಳಿ ಈ ಸ್ಫೋಟ ಸಂಭವಿಸಿದೆಯೆಂದು ಖಾಸಗಿ ಟಿವಿ ಡಾನ್ ನ್ಯೂಸ್ ವರದಿ ಮಾಡಿದೆ. |