
| ಅಹಮದಾಬಾದ್: ಪಾಕಿಸ್ತಾನದಲ್ಲಿ ಶ್ರೀಲಂಕಾ ತಂಡದ ಆಟಗಾರರ ಮೇಲೆ ನಡೆದ ಭಯೋತ್ಪಾದಕರ ದಾಳಿ ನಂತರ ಭಾರತ ಪ್ರವಾಸದ ಬಗ್ಗೆ ತೀವ್ರ ಕಾಳಜಿಗೊಂಡಿರುವ ಲಂಕಾ ತಂಡದ ಆಡಳಿತ ಮಂಡಳಿಯು ಭದ್ರತಾ ಸಮನ್ವಯಾಧಿಕಾರಿಗೆ ಬರೆದ ಪತ್ರದಲ್ಲಿ ಸುರಕ್ಷತೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ನಾಯಕ ಕುಮಾರ ಸಂಗಕ್ಕಾರ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. |