
| ವಾಷಿಂಗ್ಟನ್: ಅಫ್ಘಾನಿಸ್ತಾನದ ದಕ್ಷಿಣ ಭಾಗದ ಮಾರ್ಜಾದಲ್ಲಿ ಠಿಕಾಣಿ ಹೂಡಿ ಕಾರ್ಯಾಚರಿಸುತ್ತಿರುವ ತಾಲಿಬಾನ್ ಉಗ್ರಗಾಮಿ ಸಂಘಟನೆ ತೀವ್ರವಾಗಿ ಹಣಕಾಸಿನ ಮುಗ್ಗಟ್ಟಿಗೆ ಒಳಗಾಗಿರುವುದಾಗಿ ಅಮೆರಿಕದ ಜನರಲ್‌ವೊಬ್ಬರು ತಿಳಿಸಿದ್ದಾರೆ. |
| ಪಾಟ್ನಾ: ಪೊಲೀಸ್ ಅಧಿಕಾರಿಗಳನ್ನು ಅಪಹರಿಸಿದ್ದ ನಕ್ಸಲರು ತಮ್ಮ ಬೇಡಿಕೆಗೆ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |
| ಹೈದರಾಬಾದ್: ಶ್ರೀಮಂತ ದೇವರು ಎಂದು ಜಗದ್ವಿಖ್ಯಾತಿ ಪಡೆದಿರುವ ತಿರುಪತಿ ಬಾಲಾಜಿಗೂ ವಿಮೆ. ಹೌದು, ತಿರುಮಲ ಬೆಟ್ಟದಲ್ಲಿರುವ ಎಲ್ಲಾ ದೇವಸ್ಥಾನಗಳು ಮತ್ತು ಅಲ್ಲಿನ ರಾಶಿ ರಾಶಿ ಚಿನ್ನಾಭರಣಗಳಿಗೆ 52,000 ಕೋಟಿ ರೂಪಾಯಿಗಳ ವಿಮೆ ಮಾಡಲಾಗುತ್ತಿದೆ. ಪ್ರತಿದಿನ 70,000ಕ್ಕೂ ಹೆಚ್ಚು ಭಕ್ತಾದಿಗಳು ದರ್ಶನ ಮಾಡುತ್ತಿರುವ ತಿರುಪತಿ ಬಾಲಾಜಿ ದೇವಳಕ್ಕೆ ಪ್ರತಿ ತಿಂಗಳು ಹುಂಡಿ, ಟಿಕೆಟ್ ಮಾರಾಟ, ಲಡ್ಡು ಮತ್ತಿತರ ಮೂಲಗಳಿಂದ 10 ಕೋಟಿ ರೂಪಾಯಿಗಳ ಆದಾಯವಿದೆ. |
| ಬರೇಲಿ: ಲಂಚ ಸ್ವೀಕರಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರನ್ನು ಆರೋಪಿ ಸಂಚಾರಿ ಪೊಲೀಸ್ ಪೇದೆಗಳು ರಸ್ತೆಯಲ್ಲಿ ಎಳೆದಾಡಿದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬರೇಲಿ ಪೊಲೀಸ್ ವರಿಷ್ಠಾಧಿಕಾರಿ (ಟ್ರಾಫಿಕ್) ಕಲ್ಪನಾ ಸಕ್ಸೇನಾ ಇದೀಗ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕೈ ಮುರಿತಕ್ಕೊಳಗಾಗಿದ್ದು, ತಲೆಗೂ ಏಟಾಗಿದೆ. |
| ಬೀಜಿಂಗ್: ಚೀನಾದಲ್ಲಿ ಇತ್ತೀಚೆಗೆ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗತೊಡಗಿದ್ದು, ಗುರುವಾರವೂ ಕೂಡ ಸುಮಾರು 120 ಕಿ.ಮೀಟರ್‌ವರೆಗೆ ಸಾವಿರಾರು ಕಾರ್ಗೋ ಟ್ರಕ್ಸ್‌ಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿರುವುದಾಗಿ ವರದಿಯೊಂದು ತಿಳಿಸಿದೆ. |
| ಲಂಡನ್: ಭಿಕ್ಷುಕನ ಸೋಗಿನಲ್ಲಿ 23,000 ಪೌಂಡ್ (ಸುಮಾರು 17 ಲಕ್ಷ ರೂಪಾಯಿ) ಹಣವನ್ನು ಸಂಗ್ರಹಿಸಿದ್ದ ಬ್ರಿಟನ್ ಪ್ರಜೆಯೊಬ್ಬನಿಗೆ ನ್ಯಾಯಾಲಯವು ದಂಡ ವಿಧಿಸಿದೆ. ಸ್ಕ್ರಫಿ ಡೇನಿಯಲ್ ಟೆರಿ ಎಂಬಾತನೇ ಈ ಕುಬೇರ ಭಿಕ್ಷುಕ. ಈತ ತಾನು ನಿರಾಶ್ರಿತ ಎಂದು ಹೇಳಿಕೊಳ್ಳುತ್ತಾ ಅಂಗಡಿ-ಮಳಿಗೆಗಳ ಹೊರಗೆ ಮಲಗಿಕೊಂಡು ಕರುಣೆ ಗಿಟ್ಟಿಸಿಕೊಂಡು ಹಣ ಸಂಪಾದಿಸಿದ್ದ. |
| ನವದೆಹಲಿ: ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಗೊಂಡು ದೇಶವನ್ನು ಬ್ರಿಟೀಷರಿಂದ ಮುಕ್ತಿಗೊಳಿಸುವಲ್ಲಿ ತನ್ನದೇ ಪಾತ್ರ ನಿರ್ವಹಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ 125 ವರ್ಷಗಳು ತುಂಬಿದ ಹೊತ್ತಿನಲ್ಲಿ ನಿರಂತರ 12 ವರ್ಷಗಳ ಕಾಲ ಸಾರಥಿಯಾಗಿ ದಾಖಲೆ ನಿರ್ಮಿಸಿರುವ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸತತ ನಾಲ್ಕನೇ ಬಾರಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಗುರುವಾರವಷ್ಟೇ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಎಐಸಿಸಿ ಪ |
| ನ್ಯೂಯಾರ್ಕ್: 2001ರ ಸೆಪ್ಟೆಂಬರ್ 11ರಂದು ಒಸಾಬಾ ಬಿನ್ ಲಾಡೆನ್ ಪಡೆಯಿಂದ ಧ್ವಂಸಗೊಂಡಿದ್ದ ವಿಶ್ವ ವ್ಯಾಪಾರ ಕೇಂದ್ರದ ಸ್ಥಳದಲ್ಲಿ ವಿವಾದಕ್ಕೊಳಗಾಗಿರುವ ಮುಸ್ಲಿಂ ಸಾಮುದಾಯಿಕ ಕೇಂದ್ರ ಮತ್ತು ಮಸೀದಿಯನ್ನು ನಿರ್ಮಾಣ ಮಾಡುವುದಕ್ಕೆ ನ್ಯೂಯಾರ್ಕ್ ನಗರದ ಬಹುತೇಕ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. |
| ಕರಾಚಿ/ಲಂಡನ್. ಸೆ.3 ಸ್ಪಾಟ್- ಫಿಕ್ಸಿಂಗ್ ಆರೊಪ ಹೊತ್ತಿರುವ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೀರ್ ಅವರನ್ನು ಪಾಕಿಸ್ತಾನ ತಂಡದಿಂದ ಕೈ ಬಿಡಲಾಗಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೂ ಮೈದಾನಕ್ಕೆ ಕಾಲಿಡುವಂತಿಲ್ಲ ಎಂದು ಐಸಿಸಿ ಸೂಚಿಸಿದೆ.ಐಸಿಸಿ, ಇಸಿಬಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧಿಕಾರಿಗಳ ನಡುವಿನ ಸುದೀರ್ಘ ಮಾತುಕತೆಯ ಬಳಿಕ ಈ ಬೆಳವಣಿಗೆ ಆಗಿದೆ. ಆದರೆ ಪಿಸಿಬಿಯು |
| ನವದೆಹಲಿ, ಸೆ.3: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೂಲಭೂತವಾದಿಗಳು ಜಿಹಾದ್ ಹೆಸರಿನಲ್ಲಿ ಉಗ್ರಗಾಮಿ ಚಟುವಟಿಕೆ, ತರಬೇತಿಯಲ್ಲಿ ತೊಡಗಿರುವುದು ಸರ್ವವಿದಿತ. ಆದರೆ, ಈಗ ಮಹಿಳೆಯರ ಪ್ರತ್ಯೇಕ ಆತ್ಮಾಹುತಿ ದಳವನ್ನು ರಚಿಸುತ್ತಿರುವ ಉಗ್ರಗಾಮಿ ಸಂಘಟನೆಗಳು ಸದ್ಯದಲ್ಲೇ ಮಹಿಳಾ ಜಿಹಾದಿಗಳನ್ನು ಭಾರತಕ್ಕೆ ಬಿಡಲಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.ಲಷ್ಕರ್ ಇ ತೋಯ್ಬಾ, ಜೈಷ್ ಇ ಮೊಹಮ್ಮದ್ ಸಂಘಟನೆಗಳು ಈ ತರಬೇತಿ ಕೇಂದ್ರದ |
| ಬಳ್ಳಾರಿ, ಸೆ. 3: ಶಿರಡಿಯಿಂದ ಬಳ್ಳಾರಿಗೆ ಹಿಂದಿರುಗುತ್ತಿದ್ದ ಕಾರ್ ಕುರೇಕುಪ್ಪ ಸಮೀಪದ ತುಂಗಭದ್ರಾ ಹೈಲೆವೆಲ್ ಕಾಲುವೆಗೆ ನುಗ್ಗಿದ ಕಾರಣ ಐವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟು, ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕಾರಿನ ಚಾಲಕ ನಿಗೂಢವಾಗಿ ನಾಪತ್ತೆ ಆಗಿರುವ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ. ಮೃತರು ಬಳ್ಳಾರಿ ನಗರದ ತಾಳೂರು ರಸ್ತೆಯ ಶ್ರೀನಗರದ ಗೋವಿಂದಪ್ಪ ಕಲ್ಯಾಣಮಂಟದ ಪಕ್ಕದ ನಿವಾಸಿಗಳಾದ |
| ಒಮ್ಮೆ ಚಿತ್ರ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನಿಸುತ್ತದೆ. ಪಾತ್ರಗಳು ಕಾಡುತ್ತವೆ. ಹಾಡುಗಳು ಗುನುಗುನಿಸುತ್ತವೆ. ಎಲ್ಲೂ ಬೋರು ಹೊಡೆಸುವುದಿಲ್ಲ. ಶೇ.100ರಷ್ಟು ಪರಿಶುದ್ಧ ಮನರಂಜನಾತ್ಮಕ ಚಿತ್ರ. ಗಾಂಧಿನಗರದ ಸಿದ್ಧ ಸೂತ್ರಗಳಿಗೆ ಸೆಡ್ಡುಹೊಡೆಯುತ್ತದೆ. ಮಚ್ಚು, ಲಾಂಗು, ಮಳೆ, ಐಟಂ ಸಾಂಗು, ಮಸಾಲೆ ವಗೈರೆ ನಿರೀಕ್ಷಿಸಿ ಹೋದರೆ ನಿರಾಸೆ ಕಟ್ಟಿಟ್ಟ ಬುತ್ತಿ! ಪ್ರೇಕ್ಷಕರ ನಿರೀಕ್ಷೆಗಳು ಹುಸಿಯಾಗಿಲ್ಲ. ಯೋಗರಾಜ್ ಭಟ್ಟರು ನಂಬಿಕೆ ಉಳಿಸಿಕೊಂಡಿದ್ದಾರೆ. ಅವರ |
| ಬೆಂಗಳೂರು, ಸೆ. 3 : ಹಾಸನ ವೈದ್ಯಕೀಯ ಕಾಲೇಜಿನ ನೇಮಕಾತಿ ಹಗರಣದಲ್ಲಿ ರಾಮಚಂದ್ರಗೌಡ ಹಾಗೂ ಅವರ ಪುತ್ರ ಸಪ್ತಗಿರಿಗೌಡ ಶಾಮೀಲಾಗಿರುವುದು ಸ್ಪಷ್ಟವಾಗಿದ್ದು ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಆಗ್ರಹಿಸಿದ್ದಾರೆ. ಹಾಸನದ ವೈದ್ಯಕೀಯ ಕಾಲೇಜು ನೇಮಕಾತಿ ಹಗರಣದ ರಹಸ್ಯವನ್ನು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟ ಅವರು, ನೇಮಕಾತಿಯಲ್ಲಿ ಹಣ ಕಳೆದುಕೊಂಡ |
| ರಾಂಚಿ, ಸೆ. 2 : ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಂದರ್ಭ ನಡೆದ ಕೋಮು ಗಲಭೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಎಂಟು ಜನರಿಗೆ ಗಾಯಗಳಾಗಿರುವ ಘಟನೆ ಇಲ್ಲಿನ ಹಿಂದ್ ಪರಾ ಪ್ರದೇಶದಲ್ಲಿ ನಡೆದಿದೆ. ಧ್ವನಿವರ್ಧಕ ವಿಷಯವಾಗಿ ಎರಡೂ ಕೋಮಿನ ಜನರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ಗಂಪಿನವರು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿದ |
| ಮಡಿಕೇರಿ, ಸೆ.3: ಕೊಡಗಿನ ವಿಶಿಷ್ಟ ಹಬ್ಬ ಕೈಲ್ ಮುಹೂರ್ತವನ್ನು ಜಿಲ್ಲೆಯಾದ್ಯಂತ ಸಂತಸ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಕೊಡವ ಭಾಷೆಯಲ್ಲಿ ಕೈಲ್ ಪೊಳ್ದ್ ಎಂದು ಕರೆಯಲಾಗುತ್ತದೆ. ಕೈಲ್ ಎಂದರೆ "ಆಯುಧ" ಪೊಳ್ದ್ ಎಂದರೆ "ಪೂಜೆ" ಹಾಗಾಗಿ ಕೊಡಗಿನವರ ಪಾಲಿಗೆ ಇದು ಆಯುಧಪೂಜೆ.ಪ್ರತಿ ವರ್ಷ ಸೆಪ್ಟಂಬರ್ 3 ರಂದು ಕೈಲ್ ಮುಹೂರ್ತವನ್ನು ಆಚರಿಸಲಾಗುತ್ತದೆ. ಇಲ್ಲಿ ಆಚರಿಸಲ್ಪಡುವ |
| ನವದೆಹಲಿ, ಸೆ. 3 : ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ಸೋನಿಯಾ ಗಾಂಧಿ ನಾಲ್ಕು ಸಲ ಅಲ್ಲ 40 ಬಾರಿ ಅವರೇ ವಹಿಸಿಕೊಳ್ಳುತ್ತಾರೆ. ಇನ್ನೊಂದು ಪಕ್ಷದ ಆಂತರಿಕ ವಿಷಯದ ಬಗ್ಗೆ ಮಾತನಾಡುವ ಹಕ್ಕು ಪ್ರತಿಪಕ್ಷದವರಿಗಿಲ್ಲ ಎಂದು ಕಾಂಗ್ರೆಸ್ ಖಂಡುತುಂಡಾಗಿ ಹೇಳಿದೆ. ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ ಅವರು, ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ ಹಾಗೆ |